SHARE

ಬೆಳಗಾವಿ: ರೈತರಿಗೆ ನ್ಯಾಯ ಕೊಡಲು ಎರಡು ದಿನ ಕಾಯುತ್ತೇವೆ ತದನಂತರ STP ಕೆಲಸ ನಿಲ್ಲಿಸುತ್ತೇವೆ ಎಂದು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತುರ್ತು ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ.

ಹಲಗಾ ರೈತರ ಬೆಲೆಬಾಳುವ ಕೃಷಿ ಜಮೀನಿಗೆ ಪರ್ಯಾಯವಾಗಿ ಸೂಕ್ತ ಬೆಲೆ ಕೊಡಬೇಕಲ್ಲವೇ ಎಂದು ಪ್ರಶ್ನಿಸಿರುವ ಅವರು ತನ್ನ ಹೋರಾಟ ರಾಜ್ಯ ಸರಕಾರದ ವಿರುದ್ಧ ಅಲ್ಲ ಜಿಲ್ಲಾಡಳಿತದ ವಿರುದ್ದ ಎಂದು ಸ್ಪಷ್ಠಪಡಿಸಿದ್ದಾರೆ. ಒಟ್ಟು 150 ಜನ ರೈತರು ಭೂಮಿ ಕಳೆದುಕೊಂಡ ಸಂಕಷ್ಟದಲ್ಲಿದ್ದಾರೆ. ಕಳೆದ 2009ನೇ ಸಾಲಿನ ನಿರ್ಧಾರವೆಂದು ಹೇಳಿ ಜಿಲ್ಲಾಡಳಿತ ರೈತರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ ಎಂದರು. ಇನ್ನೆರಡು ದಿನ ಜಿಲ್ಲಾಡಳಿತದ ನಿರ್ಧಾರ ಕಾಯ್ದು ನಂತರ STP ಕೆಲಸ ನಿಲ್ಲಿಸಲು ನಾನೇ ಹೊಲದಲ್ಲಿ ತಡೆಹಿಡಿಯುವೆ ಎಂದು ಎಚ್ಚರಿಸಿದರು.