SHARE

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ದೋಸ್ತಿ ಸರಕಾರ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತತೆ ಇದೆ. ಸಂಪುಟದಲ್ಲಿ ಪಕ್ಷೇತರ ಶಾಸಕರಾದ ಶಂಕರ್ ಹಾಗೂ ನಾಗೇಶ್ ಗೆ ಸ್ಥಾನ ನೀಡಲು ಉಭಯ ನಾಯಕರು ತಿರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಕಾಂಗ್ರೆಸ್ಸ್ ಪಕ್ಷದಿಂದ ಒಬ್ಬ ಮುಖಂಡರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇತ್ತೀಚಿಗೆ ಅಷ್ಟೇ ಕೆಲ ಪಕ್ಷದ ಹಿರಿಯ ನಾಯಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು ಈಗ ಅದರಲ್ಲಿ ಯಾರಿಗೆ ಸಚಿವ ಸಂಪುಟ ಸ್ಥಾನ ಪಕ್ಷ ನೀಡಲಿದೆ ಎಂದು ಕಾದು ನೋಡಬೇಕಿದೆ.