SHARE

ಬೆಳಗಾವಿ: ನಟನೆ ಮತ್ತು ಕೃತಿಗಳ ಮೂಲಕ ರಂಗಭೂಮಿಯನ್ನು ವಿಸ್ತರಿಸಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ ಕಾರ್ನಾಡ್ ನಿಧನಕ್ಕೆ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಸಂತಾಪ ಸೂಚಿಸಿದ್ದಾರೆ.

ಹಿರಿಯ ರಂಗಕರ್ಮಿ, ಸಮಾಜದ ಬಗ್ಗೆ ಸದಾ ಯೋಚಿಸುತ್ತಿದ್ದ ಹಿರಿಯ ಚಲನಚಿತ್ರ ನಟರೂ ಆದ ಜ್ಞಾನಪೀಠ ಪುರಸ್ಕೃತ ಪದ್ಮವಿಭೂಷಣ ಗಿರೀಶ್ ಕಾರ್ನಾಡ್ ಅಗಲಿಕೆ ನಮ್ಮನ್ನೆಲ್ಲ ದುಖಃಕ್ಕೆ ತಳ್ಳಿದೆ ಎಂದು ಅಂಗಡಿ ಸಂತಾಪ ಸೂಚಿಸಿದ್ದಾರೆ.