SHARE

ಬೆಳಗಾವಿ: ಹಲಗಾ ಎಸ್ ಟಿಪಿ ಪ್ಲಾಂಟ್ ನಿರ್ಮಾಣ ಕಾಮಗಾರಿ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಜೆ ಸಂಬಂಧಿಸಿ ಇಂದು ನಡೆಯಬೇಕಿದ್ದ ಸಭೆ ಹಠಾತ್ ರದ್ದಾಯಿತು.

ಜಿಲ್ಲಾಧಿಕಾರಿ ಕರೆದಿದ್ದ ಸಭೆಗೆ ಜಮೀನು ಕಳೆದುಕೊಳ್ಳುತ್ತಿರುವ ರೈತರು ಸೇರಿ ಹೋರಾಟಗಾರರು ಸೇರಿಬಂದಿದ್ದರು, ಭಾರಿ ಪೊಲೀಸ್ ಬಂದೋಬಸ್ತ ಹಾಕಲಾಗಿತ್ತು. ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಸರಕಾರಿ ರಜೆ ಘೋಷಣೆ ಆಗುತ್ತಿದ್ದಂತೆ ಸಭೆ ಹಠಾತ್ ರದ್ದಾಯಿತು. ಮೂರು ದಿನ ಶೋಕಾಚರಣೆ ಹಿನ್ನಲೆಯಲ್ಲಿ ಸಭೆ ಮುಂದೂಡಲ್ಪಟ್ಟಿತು.