SHARE

ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಲಾಗುತ್ತಿದ್ದು, ನರರೋಗಿಯನ್ನು ಹೊರಗೆ ಹಾಕಲಾಗಿದೆ ಎಂದು ಆರೋಪಿಸಿ ರೋಗಿಯೊಂದಿಗೆ ಪ್ರತಿಭಟನೆ ಇಂದು ನಡೆಯಿತು.

ನ್ಯಾಯವಾದಿ ಎನ್. ಆರ್. ಲಾತೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೋಗಿ ಲಕ್ಷ್ಮಣ ಗುಂಡು ಪಾಟೀಲ ಅವರೊಂದಿಗೆ ಪ್ರತಿಭಟನೆ ನಡೆಸಿದರು. ಜಿಲ್ಲಾಸ್ಪತ್ರೆ ರೋಗಿಗಳೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ. ರೋಗಿಗಳನ್ನು ನಿರ್ಲಕ್ಷಿಸಿ ಹೊರದಬ್ಬಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮತ್ತು ಬಿಮ್ಸ್ ನಿರ್ದೇಶಕರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಶಿವಾಜಿ ಕಾಗಣಿಕರ, ಕಿರಣಕುಮಾರ ಪಾಟೀಲ ಹಾಗೂ ರೋಗಿಯ ಸಂಬಂಧಿಕರು ಪ್ರಯಿಭಟನೆ ನಡೆಸಿದರು.