SHARE

ಬೆಳಗಾವಿ: ಹಿಂಡಲಗಾ, ಮರಾಠಾ ಕಾಲನಿ ಲಕ್ಷ್ಮೀ ನಗರದಲ್ಲಿ ಸ್ಥಳಿಯ ಗ್ರಾ. ಪಂ‌ನಿಂದ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಇಂದು ಪ್ರತಿಭಟನೆ ನಡೆಸಿದರು.

ಕುಡಿಯುವ ನೀರು, ಗಟಾರು, ಒಳಚರಂಡಿ, ರಸ್ತೆ ಅಭಿವೃದ್ಧಿ, ಇತರೆ ಯಾವ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿ ರಹವಾಸಿ ಮಹಿಳೆಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮತ್ತು ಜಿಪಂ. ಸಿಇಓ ಅವರಿಗರ ಮನವಿ ಸಲ್ಲಿಸಿದರು. NA ಸಬರಿಜಿಸ್ಟ್ರಾರ್ ನೋಂದಣಿ ಮಾಡಲಾದ ನಮ್ಮ ಸರ್ವೇ ನಂ. 213/1, 213/2 ಗಳಲ್ಲಿ ಮೂಲಸೌಕರ್ಯ ಒದಗಿಸದೇ ಗ್ರಾ. ಪಂ. ಬೇಜವಾಬ್ದಾರಿ ಮಾಡುತ್ತಿದೆ ಎಂದು ಗಮನ ಸೆಳೆದರು. ಎಂ. ಎಸ್. ಶಿರೋಳಕರ, ಬಿ. ಎನ್. ನಾಯಿಕ, ಮಾರುತಿ ಪಾಟೀಲ, ಎಸ್. ವಿ. ಶಿಂತ್ರಿ, ಭಾಗ್ಯಶ್ರೀ ಚೌಹಾನ್ ಇತರರು ಉಪಸ್ಥಿತರಿದ್ದರು.