SHARE

ಬೆಳಗಾವಿ: ಸವದತ್ತಿ ತಾಲೂಕು ಏಣಗಿ ಗ್ರಾಮದ ಸರ್ವಧರ್ಮ ಸ್ಮಶಾನಕ್ಕೆ ದಾರಿ ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿರುವ ಸ್ಮಶಾನಕ್ಕೆ ಶವ ಸಾಗಿಸಲು ಇಂದು ದಾರಿಯ ಕೊರತೆಯಿಂದ ತೊಂದರೆಯಾಗುತ್ತಿದೆ. ಹೊಲಗಳ ಮಾಲೀಕರು ದಾರಿ ಮಾಡಿಕೊಡುತ್ತಿಲ್ಲ. ಈ ಬಗ್ಗೆ ಸ್ಥಳೀಯ ಹಂತದಲ್ಲಿ ಮಾಡಲಾದ ಮನವಿಗಳು ಪ್ರಯೋಜನವಾಗಿಲ್ಲ ಎಂದು ಆಡಳಿತದ ಗಮನ ಸೆಳೆದರು. ಏಣಗಿ ಗ್ರಾಮಸ್ಥರು ಹಾಜರಿದ್ದರು.