SHARE

ಬೆಂಗಳೂರು: IMA ಜ್ವೆಲರ್ಸ ಮಾಲೀಕನ ಹೆಸರಲ್ಲಿ ಬೆಂಗಳೂರು ಪೋಲೀಸ್ ಕಮಿಷನರ್ ಗೆ ಕಳೆದ ರಾತ್ರಿ ಆಡಿಯೋವೊಂದು ಬಂದಿದೆ. ಇದರಲ್ಲಿ ಶಾಸಕ ರೋಷನ್ ಬೇಗ್ ವಿರುದ್ಧ 400 ಕೋಟಿ ರೂಪಾಯಿ ವಂಚನೆ ಆರೋಪ ಮಾಡಲಾಗಿದೆ. ಹಣ ವಾಪಸ್ ಕೇಳಿದಾಗ ರೌಡಿಗಳನ್ನು ಕಳಿಸಿ ಬೆದರಿಸಿದ್ದಾರೆ. ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇರುವದರಿಂದ ಹಳ್ಳಿಯೊಂದರಲ್ಲಿ ಬಚ್ಛಿಡಬಕಿದೆ ಎಂದು ಆಡಿಯೋದಲ್ಲಿ ಮನ್ಸೂರ್ ಖಾನ ಹೇಳಿದ್ದಾರೆ.

IMA ಜ್ವೆಲರ್ಸ ಮಾಲೀಕನಿಂದ ಆಡಿಯೋ ಬಿಡುಗಡೆ ಹಾಗೂ ನಾಪತ್ತೆ ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಹೆಸರು ಕೇಳಿ ಬಂದಿದೆ. ಇ ಹಿನ್ನಲೆಯಲ್ಲಿ ಶಾಸಕ ರೋಷನ್ ಬೇಗ್ ಟ್ವಿಟ್ ಮಾಡಿ ನನಗೂ ಈ ಪ್ರಕರಣಕ್ಕೂ ಯಾವುದೇ ಸಂಭಂಧ ಇಲ್ಲ ಅಂತಾ ಹೇಳಿದ್ದಾರೆ. ಅನಾವಶ್ಯಕವಾಗಿ ನನ್ನ ಹೆಸರು ಪ್ರಸ್ತಾಪ ಆಗ್ತಾ ಇದೇ, ಯಾಕೆ ಅನ್ನೋದು ಗೊತ್ತಿಲ್ಲ. ನಾನು ಪೋಲೀಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.