SHARE

ಬೆಳಗಾವಿ: ಜಿಲ್ಲೆಯ 506 ಗ್ರಾ. ಪಂ. ಪೈಕಿ ಪ್ರತಿ ಪಂಚಾಯಿತಿಗೆ ಕನಿಷ್ಠ ೫೦೦ ಗಿಡ ನೆಡುವ ಅಭಿಯಾನ ನರೇಗಾ ಅಡಿ ಕೈಗೊಳ್ಳಲಾಗಿದೆ ಎಂದು ಜಿಪಂ. ಸಿಇಓ ಡಾ. ರಾಜೇಂದ್ರ ಕೆ. ವಿ. ತಿಳಿಸಿದರು.

ಸ್ವಚ್ಛಮೇವ ಜಯತೇ ಜನಾಂದೋಲನ ನಗರದ ಚನ್ನಮ್ಮ ವೃತ್ತದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಜಾಗೃತಿ ಮತ್ತು ಪರಿಸರ ಬೆಳೆಸಲು ಈ ಆಂದೋಲನ‌ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು. ಚನ್ನಮ್ಮ ವೃತ್ತದಲ್ಲಿ ಶಾಲಾ ಮಕ್ಕಳ ಜಾಥಾಗೆ ಚಾಲನೆ ನೀಡಿದರು. ನಗರದ ಮಹಿಳಾ ವಿದ್ಯಾಲಯ, ಮರಾಠಾ ಮಂಡಳ ಸೆಂಟ್ರಲ್ ಶಾಲಾ ಮಕ್ಕಳು ಭಾಗವಹಿಸಿದರು.