SHARE

ಬೆಳಗಾವಿ: ಲೋಕಸಭೆ ಚುನಾವಣೆ ನಿಮಿತ್ತ ಬೆಳಗಾವಿ ನಗರದಿಂದ ವರ್ಗಾವನೆ ಆಗಿದ್ದ ಬಹುತೇಕ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ಸ್ ಮರು ವರ್ಗಾಯಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ವರ್ಗಾವಣೆ ಆಗಿದ್ದ ಪೊಲೀಸ್ ಇನ್ಸಪೆಕ್ಟರಗಳನ್ನು ಮರು ನಿಯುಕ್ತಿಗೊಳಿಸಲಾಗಿದೆ. ಶ್ರೀದೇವಿ ಪಾಟೀಲ, ಮಹಿಳಾ ಠಾಣೆ, ಜಾವೇದ ಮುಶಾಪುರಿ ಶಹಾಪುರ ಠಾಣೆ, ಆರ್. ಬಿ. ಗಡ್ಡೇಕರ ಮಾಳಮಾರುತಿ ಠಾಣೆ, ಎಂ. ದೇಶನೂರ ಟಿಳಕವಾಡಿ ಠಾಣೆ, ಎ. ಎಸ್. ಗುದಿಗೊಪ್ಪ ಸಿಸಿಆರ್ ಬಿ, ನಾರಾಯಣಸ್ವಾಮಿ ಹಿರೇಬಾಗೇವಾಡಿ, ಧೀರಜ್ ಶಿಂಧೇ ಖಡೇಬಜಾರ್ ಠಾಣೆ, ಆರ್. ಆರ್. ಪಾಟೀಲ ಟ್ರಾಫಿಕ್ ಉತ್ತರ, ಜೆ. ಎಂ. ಕಾಲಿಮಿರ್ಚಿ ಎಪಿಎಂಸಿ ಠಾಣೆ, ಸಂಜೀವ ಕಾಂಬಳೆ ಸಿಸಿಐಬಿ, ಯು. ಎಚ್. ಸಾತೇನಹಳ್ಳಿ ಸಿಸಿಪಿ (ಸ್ಪೆ) ಸೇರಿ ಇತರ ಅಧಿಕಾರಿಗಳು ಬೆಳಗಾವಿಗೆ ಮರುನಿಯುಕ್ತಿಗೊಂಡಿದ್ದಾರೆ.