SHARE

ಬೆಳಗಾವಿ: ಲಂಚ ಸ್ವೀಕರಿಸುತ್ತಿದ್ದ ಸಹಕಾರಿ ಲೆಕ್ಕಪತ್ರ ಇಲಾಖೆ ಉಪನಿರ್ದೇಶಕರ ಕಚೇರಿಯ FDA ಪ್ರಸನ್ನ ಮನೋಹರ ಭಾದಲೆ ಎಂಬುವವರನ್ನು ACB ಇಂದು ಬಲೆಗೆ ಕೆಡವಿದೆ.

ಸದಾಶಿವ ನಗರದ ಕಾಡಯ್ಯ ನಾಗಯ್ಯ ಹಿರೇಮಠ ಎಂಬುವವರು ನೀಡಿದ ದೂರಿನ ಮೇರೆಗೆ ದಾಳಿ ಮಾಡಿದ ಎಸಿಬಿ ಇನ್ಸಪೆಕ್ಟರ್ ಮಂಜುನಾಥ ಕಬ್ಬೂರಿ ನೇತೃತ್ವದ ತಂಡ ₹2000 ಪಡೆಯುತ್ತಿದ್ದವನನ್ನು ಬಲೆಗೆ ಕೆಡವಿದೆ. RTI ಅಡಿ 2015ರಿಂದ 2018ರವರೆಗಿನ ಅಡಿಟ್ ರಿಪೋಟ್ ಕೊಡಲು ಈತ ಹಣ ಕೇಳಿದ್ದ, ಜೊತೆಗೆ ಕೆಲಸದ ವಿಳಂಬ ಮಾಡಿದ್ದ ಬಗ್ಗೆ ಎಸಿಬಿ ಖಚಿತಪಡಿಸಿಕೊಂಡಿತ್ತು. ಆರೋಪಿತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.