SHARE

ಖಾನಾಪೂರ: ತಾಲೂಕಿನ ಬೀಡಿ ಗ್ರಾಮವು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು. ವಾಣಿಜ್ಯ ಕೇಂದ್ರವಾಗಿ ಬೇಳೆಯುತ್ತಿದೆ. ಆದರೆ ಇಲ್ಲಿಯ ಪುರಾತನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಪ್ರವಾಸಿ ಮಂದಿರ ಮಾತ್ರ ಹಾಳುಕೊಂಪೆಯಾಗಿ ಪರಿವರ್ತನೆಗೊಂಡಿದೆ.

ಪ್ರವಾಸಿ ಮಂದಿರದ ಎರಡು ಕೊಠಡಿಗಳು ಬಿದ್ದು ದಶಕಗಳೇ ಕಳೆದಿವೆ ಇದರ ಅಡುಗೆಮನೆ ಶೀತಿಲಾವಸ್ಥೆಯಲ್ಲಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಧ್ಯಪಾನ ಮಾಡುವವರಿಗೆ, ಅನೈತಿಕ ಚಟುವಟಿಕೆಯ ತಾಣವಾಗಿ ಪ್ರವಾಸಿ ಮಂದಿರ ಮಾರ್ಪಟ್ಟಿದೆ. ಇಲ್ಲಿಯ ಕುಡಿಯುವ ನೀರಿನ ಬಾವಿ ಕಸಕಡ್ಡಿ ತುಂಬಿಕೊಂಡು ಗಲಿಜಾಗಿದೆ. ಹತ್ತು ಹಲವು ಜನರಿಗೆ ಆಶ್ರಯವಾಗಬೇಕಾದ ಪ್ರವಾಸಿ ಮಂದಿರ ಹಾಳಿಕೊಂಪೆಯಂತಾಗಿ ಸಂಬಂಧಪಟ್ಟ ಇಲಾಖೆ ಹಾಗೂ ಸಚೀವರಿಗೆ ಹಿಡಿ ಶಾಪಹಾಕುತ್ತಿದೆ.ಈಗಲಾದರೂ ಇಕಡೆಗೆ ಗಮನ ಹರಿಸಿ ಪ್ರವಾಸಿ ಮಂದಿರವನ್ನು ಅಭಿವೃದ್ಧಿ ಪಡಿಸಿ ಮೆಲ್ದರ್ಜೆಗೆ ಎದುರಿಸುವಂತೆ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ.ರಾಜೀಬಾಯಿ , ವೇದಿಕೆ ಯ ಖಾನಾಪೂರ ತಾಲೂಕಾ ಅಧ್ಯಕ್ಷ ಮುನೀರ್ ಶಮಶೇರ್, ಮಲ್ಲಯ್ಯ ಹಿರೇಮಠ, ಬಸವರಾಜ ಭಂಗಿ, ಮಲೀಕಸಾಬ ನಗಾರ್ಚಿ, ದುಂಡಯ್ಯ ಹಿರೇಮಠ ಮುಂತಾದವರು ಆಗ್ರಹಿಸಿದ್ದಾರೆ.

ಪ್ರವಾಸಿ ಮಂದಿರ ಮೆಲ್ದರ್ಜೆಗೆ ಎರಿಸಿದರೆ ಗೋವಾ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ತಂಗಲು ಅನುಕೂಲವಾಗುವಲ್ಲದೆ ಐತಿಹಾಸಿಕ ಕುರುವನ್ನು ಜಿವಂತವಾಗಿಡಲು ಸಾಧ್ಯ. ಸಂಬಂಧ ಪಟ್ಟ ಸಚೀವರು, ಶಾಸಕರು, ಅಧಿಕಾರಿಗಳು ಈಕಡೆಗೆ ಗಮನ ಹರಿಸಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವದಾಗಿ ಎಂ.ಎಂ.ರಾಜೀಭಾಯಿ ಎಚ್ಚರಿಸಿದ್ದಾರೆ.