SHARE

ಬೆಳಗಾವಿ: ಜೋಯಿಡಾ ಉಪವಿಭಾಗದ ಲೋಕೋಪಯೋಗಿ AEE ಉದಯ ಛಬ್ಬಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.

ಬೆಳಗಾವಿ ನಗರದ ಭಾಗ್ಯ ನಗರ ಕೃಷಿ ಕಾಲೋನಿ, ಜೋಯಿಡಾದ ಅವರ ಕಚೇರಿ, ಇನಚಾರ್ಚ್ ವಹಿಸಿಕೊಂಡಿರುವ ದಾಂಡೇಲಿ ನಗರಪಾಲಿಕೆ ಕಚೇರಿ ಹಾಗೂ ಅಧಿಕಾರಿಯ ತಾಯಿ ವಾಸಿಸುವ ದಾಂಡೇಲಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಮನೆ ತಪಾಸಣೆ ನಡೆದಿದೆ. ಎಸಿಬಿ ಡಿಎಸ್ಪಿ ಗಿರೀಶ್, ರಮೇಶ ಹಾನಾಪೂರ, ಎಸ್. ಆರ್. ಕತ್ತಿಮನಿ, ವಿಶ್ವನಾಥ ಕಬ್ಬೂರಿ ಮತ್ತಿತರ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.