SHARE

ಬೆಳಗಾವಿ: ನಿಗದಿತ 40 ಗಂಟೆಯ ಸಮಯದಲ್ಲಿ ಬರಿ 29 ಗಂಟೆಯಲ್ಲಿ 600 ಕೀಮಿ ಸೈಕಲ್ ರೈಡ್ ಮಾಡುವ ಮೂಲಕ ಬೆಳಗಾವಿಯ ಸಂಜಯ ಕುರಬರ ಹೆಸರು ಮಾಡಿದ್ದಾರೆ. ಪೂನಾ ಬಿಆರ್ ಎಂ ಆಯೋಜಿಸಿದ್ದ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಂಜಯ ಬೆಳಗಾವಿ ರೈಡರ್ಸ್ ಕ್ಲಬ್
ದಿಂದ ಪ್ರತಿನಿಧಿಸಿದ್ದರು.

ಶನಿವಾರ ಬೆಳಿಗ್ಗೆ ಪ್ರಾರಂಭವಾದ ಸೈಕ್ಲಿಂಗ್ ಕನಿಷ್ಠ ಅವಧಿ 40 ಗಂಟೆಯೊಳಗೆ 11ಗಂಟೆ ಕಡಿಮೆ ಅವಧಿಯಲ್ಲಿ ನಿಗದಿತ ಗುರಿ ತಲುಪಿ ಸಂಜಯ ಸಾಧನೆ ಮಾಡಿದ್ದು, ಬೆಳಗಾವಿಯ ರೈಡರ್ಸ್ ಕ್ಲಬ್ ಮತ್ತು ವೇಣುಗ್ರಾಮ ಅಭಿನಂದನೆ ಸಲ್ಲಿಸಿವೆ. ಇಂದು ಸಂಜೆ ನಗರದ ಹಿಂಡಾಲ್ಕೊ ಬಳಿ ಸ್ವಾಗತ ನಡೆಯಲಿದೆ.