SHARE

ಬೆಂಗಳೂರು: ಹೌದು ಇಂದು ಬೆಳ್ಳಂಬೆಳಗ್ಗೆ ಚಾಲೆಂಜಿಂಗ್​​​ ಸ್ಟಾರ್ ದರ್ಶನ್ ಟ್ವೀಟ್ ಮಾಡಿ​ ಬಾಂಬ್​ ಸಿಡಿಸಿದ್ದಾರೆ. ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್​ ಚಾಲೆಂಜ್​, ಮಧ್ಯಾಹ್ನ ಫೇಸ್ಬುಕ್​ ಲೈವ್​ ಬರ್ತೀನಿ, ಬಂದಾಗ ಎಲ್ಲಾನು ತಿಳಿಸುತ್ತೇನೆ’ ಎಂದು ಟ್ವೀಟ್​ ಮಾಡುವ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದ್ದಾರೆ.

ಬೇರೆ ಯಾವುದಾದ್ರೂ ಉದ್ದೇಶಕ್ಕೆ ಅವರು ಈ ರೀತಿ ಟ್ವೀಟ್​ ಮಾಡಿದ್ದಾರಾ ಅಥವಾ ನಿಜಕ್ಕೂ ಗರಂ ಆಗಿದ್ದಾರಾ ಅನ್ನೋದು ಮಧ್ಯಾಹ್ನ ದರ್ಶನ್​ ಲೈವ್​​ನಲ್ಲಿ ಮಾತಾಡಿದಾಗಲೇ ತಿಳಿಯಲಿದೆ.