SHARE

ಬೆಳಗಾವಿ: ಸರಕಾರ ಬೀಳಿಸುವ ಬಂಡುಕೋರರ ಸಾಲಿಗೆ ಖಾನಾಪೂರ ಶಾಸಕಿ ಡಾ. ಅಂಜಲಿ ನಿಂಬಾಳಕರ ಹಾಗೂ ಯಕ್ಸಂಬಾ ಶಾಸಕ ಗಣೇಶ ಹುಕ್ಕೇರಿ ಸೇರಿರುವುದು ಚರ್ಚೆ ಗರಿಗೆದರಿಸಿದೆ.

ಈ ಇಬ್ಬರೂ ಬೆಳಗಾವಿ ಜಿಲ್ಲೆ ಶಾಸಕರು ಕೊನೆ ಹಂತದಲ್ಲಿ ಬಂಡುಕೋರ ಸಮ್ಮಿಶ್ರ ಶಾಸಕರ ಸಾಲುಗೆ ಸೇರಿದ ಬಗ್ಗೆ ಖಚಿತ ಮೂಲಗಳು ಪ್ರಶ್ನಾರ್ಥಕ ಗುಟ್ಟು ಬಿಟ್ಟುಕೊಟ್ಟಿವೆ. ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಬಂಡಾಯಕ್ಕೆ ಹೆಚ್ಚಿನ ಬಲ ನೀಡುವಲ್ಲಿ ಈ ಇಬ್ಬರು ಕಾಂಗ್ರೆಸ್ಸಿಗರು ಕೈ ಜೋಡಿಸಿರುವುದು ರಟ್ಟಾಗಿದೆ.

ಜೊತೆಗೆ ಬೈಲಹೊಂಗಲದ ಮಹಾಂತೇಷ ಕೌಜಲಗಿ ಸಹ ಇಂದು ತಮ್ಮ ನಡೆ ಸಂಶಯಾಸ್ಪದವಾಗಿ ತಿರುಗಿಸಿದ್ದಾರೆ.