SHARE

ಬೆಳಗಾವಿ: ಇಟಗಿ ಗ್ರಾಮದ ಗ್ರಾಪಂ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಜೆಡಿಎಸ್ ಮುಖಂಡ ನಾಸೀರ ಬಾಗವಾನ ಅವರು ಐತಿಹಾಸಿಕ ದೊಡ್ಡ ಕೆರೆಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ತಮ್ಮ ಸ್ವಂತ ಕರ್ಚಿನಿಂದ ಸುಮಾರು 30 ಲಕ್ಷ ರೂಗಳ ಮೊತ್ತದ ಗುದ್ದಲಿ ಪೂಜಾ ನೆರವೇರಿಸಿ ಮಾತನಾಡಿದರು. ಜೀವನದಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಮುಂದಿನ ದಿನಗಳಲ್ಲಿ ಭಗವಂತ ನನಗೆ ಯಶಸ್ಸು ನೀಡಲಿದ್ದಾನೆ. ಇನ್ನೂ ಒಂದು ತಿಂಗಳ ಅವದಿಯಲ್ಲಿ ಮಲಪ್ರಭಾ ನದಿಯಿಂದ ಇಟಗಿ ಕೆರೆಗೆ ನೀರು ಬರಲಿದೆ ಎಂದರು.

ತಾಪಂ.ಸದಸ್ಯ ಬಸವರಾಜ ಸಾಣಿಕೊಪ್ಪ ಮಾತನಾಡಿ, ಮಲಪ್ರಭಾ ನದಿಯಿಂದ ಇಟಗಿ ಕೆರೆ ತುಂಬಿಸಲು ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮತ್ತು ಯಡತಾಕಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜೆಡಿಎಸ್ ಮುಖಂಡ ನಾಸೀರ ಬಾಗವಾನ ಅವರು ಸರಕಾರ ಮಾಡದ ಮಲಪ್ರಭಾ ನದಿಯಿಂದ ಕೆರೆ ತುಂಬಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಗ್ರಾಪಂ ಹಾಗೂ ಗ್ರಾಮಸ್ಥರ ವತಿಯಿಂದ ಜೆಡಿಎಸ್ ಮುಖಂಡ ನಾಸೀರ ಬಾಗವಾನ ಅವರನ್ನು ಸತ್ಕರಿಸಲಾಯಿತು. ಮುತ್ನಾಳದ ಕೇದಾರ ಶಾಖಾ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಚಿಕ್ಕಮುನವಳ್ಳಿಯ ಶ್ರೀ ಆರೂಢ ಮಠದ ಶ್ರೀ ಶಿವಪುತ್ರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಅಪ್ಪಣ್ಣ ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕೆಎಂಎಫ್ ನಿರ್ದೇಶಕ ಜಗದೀಶಗೌಡಾ ಪಾಟೀಲ, ಮಾಜಿ ಜಿಪಂ.ಸದಸ್ಯ ಶ್ರೀಕಾಂತ ಹಿರೇಮಠ, ಮಾಜಿ ರಾಣಿ ಶುಗರ ನಿರ್ದೇಶಕ ಮುದ್ದಪ್ಪ ತುರಮರಿ,ದೇವಲತ್ತಿಯ ಶ್ರೀ ಸಿದ್ದಯ್ಯ ಸ್ವಾಮಿಗಳು, ಶ್ರೀ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಕಮೀಟಿ ಅಧ್ಯಕ್ಷ ಶಿವಾನಂದ ಸವದತ್ತಿ ಹಾಗೂ ಇತರರು ಉಪಸ್ಥಿತರಿದ್ದರು.
ಈಶ್ವರ ಕರಮಳ್ಳನವರ ನಿರೂಪಿಸಿದರು. ಎಸ್.ಎಸ್. ಸವದತ್ತಿ ಸ್ವಾಗತಿಸಿದರು.