SHARE

ಬೆಳಗಾವಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಕಾಟ ತಡೆಯಲಾರದ ಸಾರಿಗೆ ಇಲಾಖೆ ಸಿಬ್ಬಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಗರದ KSRTC ಎರಡನೇ ಘಟಕದಲ್ಲಿ ನಿಲ್ಲಿಸಿದ ಬಸಗಳಲ್ಲಿ ಬೀದಿ ನಾಯಿಗಳು ಏರಿ ಕಾಟ ಕೊಡುತ್ತಿದ್ದು, ಒಳಾವರಣ ಹಾಳು ಮಾಡುತ್ತಿವೆ.

ಬಸ್ ನಿಲ್ದಾಣದಲ್ಲಿ ಗುಂಪಾಗಿ ಓಡಾಡುತ್ತಿರುವ ನಾಯಿಗಳಿಂದ ಬಸಗಳ ಸಾಮಾನ್ಯ ಚಲನವಲನಕ್ಕೆ ತೀವ್ರ ತೊಂದರೆಯಾಗಿದೆ. ಸ್ಟೀಯರಿಂಗ್ & ಸೀಟಗಳ ಮೇಲೆ ನಾಯಿಗಳು ಒಡಾಡುತ್ತಿದ್ದು, ಇದರಿಂದ ಬಸ್ ಸುವ್ಯವಸ್ಥಿತವಾಗಿ ಕಾಯ್ದುಕೊಳ್ಳುವುದು ದುಸ್ತರವಾಗಿದೆ ಎಂದು ಚಾಲಕ & ನಿರ್ವಾಹಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಬೀದಿನಾಯಿಗಳನ್ನು ಹಿಡಿದು ದೂರ ಸಾಗಿಸುವ ಕೆಲಸಕ್ಕೆ ಕೈ ಹಾಕಿದ್ದರೂ ಆ ಪ್ರಯತ್ನ ಯಾತಕ್ಕೂ ಸಾಲದು ಎಂಬುವುದು ಗಮನಾರ್ಹ.