SHARE

ಬೆಂಗಳೂರು: ರಾಜೀನಾಮೆ ನೀಡಿರೋ ಶಾಸಕ ರಮೇಶ್​​ ಜಾರಕಿಹೊಳಿ ಹಾಗೂ ಮಹೇಶ್​ ಕುಮಟಳ್ಳಿಯನ್ನ ಅನರ್ಹಗೊಳಿಸುವಂತೆ ಸ್ಪೀಕರ್​ ರಮೇಶ್​​ ಕುಮಾರ್​ಗೆ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲು ರಮೇಶ್​ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗಿತ್ತು. ಬಳಿಕ ಅತೃಪ್ತರ ಮನವೊಲಿಸಲು ರಮೇಶ್​ ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿತ್ತು. ಆಗಿನಿಂದಲೂ ಪಕ್ಷ ಬಿಡುವ ಹಾಗೂ ಬಿಜೆಪಿಗೆ ಹೋಗುವ ವಿಫಲ ಯತ್ನವನ್ನೂ ಮಾಡಿದ್ರು. ಅವರಜೊತೆಗೆ ಮಹೇಶ್​ ಕುಮಟಳ್ಳಿಯೂ ಸಹಾ ಗುರುತಿಸಿಕೊಂಡಿದ್ರು. ಈ ಹಿನ್ನೆಲೆ ಹಾಗೂ ಇಂದಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದ ಸಿದ್ದರಾಮಯ್ಯ ಇಬ್ಬರನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.