SHARE

ಬೆಂಗಳೂರು: ಅತೃಪ್ತ ಶಾಸಕರ ವಿಚಾರಣೆ ಬಳಿಕ ಸ್ಪೀಕರ್​ ರಮೇಶ್​ ಕುಮಾರ್​ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಶನಿವಾರದಂದು ಶಾಸಕರು ರಾಜೀನಾಮೆ ನೀಡಿದ್ದರು. ಅದರಲ್ಲಿ ಕೆಲ ರಾಜೀನಾಮೆ ಪತ್ರಗಳು ನಿಯಮದ ಪ್ರಕಾರ ಇರಲಿಲ್ಲ. ಹಾಗಾಗಿ ಮತ್ತೆ ರಾಜೀನಾಮೆ ಪತ್ರವನ್ನು ನೀಡಿ ಅಂತಾ ಹೇಳಿದ್ದೆ. ವಿಚಾರಣೆ ನಡೆಸಿಯೇ ರಾಜೀನಾಮೆಗಳನ್ನು ಅಂಗೀಕರಿಸಬೇಕಿತ್ತು. ಅದು ಕಾನೂನು ಬದ್ದ ಹಾಗಾಗಿ ನಾನು ವಿಚಾರಣೆಗೆ ಮುಂದಾಗಿದ್ದೆ ಅಷ್ಟೇ ಎಂದರು. ಇಂದೂ ಕೂಡಾ ಶಾಸಕರು ನನ್ನ ಬಳಿ ಬಂದು ರಾಜೀನಾಮೆ ಪತ್ರ ನೀಡಿದ್ದಾರೆ. ಅಲ್ಲದೇ, ಆದಷ್ಟು ಬೇಗ ರಾಜೀನಾಮೆಯನ್ನು ಅಂಗೀಕರಿಸ ಬೇಕು ಅಂತಾ ಮನವಿ ಮಾಡಿದ್ರು. ಆದ್ರೆ ತಕ್ಷಣವೇ ಅವರ ರಾಜೀನಾಮೆಯನ್ನು ಅಂಗೀಕರಿಸಲೂ ಸಾಧ್ಯವಿಲ್ಲ. ಅವರ ರಾಜೀನಾಮೆ ನನಗೆ ಮನವರಿಕೆಯಾಗಬೇಕು ಅಂತಾ ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದರು.

ಇದೇ ವೇಳೆ ಅತೃಪ್ತರು ಸುಪ್ರೀಂ ಕೋರ್ಟ್ ಹೋಗಿದ್ದಕ್ಕೆ ಶಾಸಕರ ಮೇಲೆ ಗರಂ ಆದರು. ಬೇಕಿದ್ದರೆ ಸ್ವತ ನಾನೆ ನಿಮಗೆ ರಕ್ಷಣೆ ಕೊಟ್ಟು ಮುಂಬೈಗೆ ಕಳಿಸಿಕೊಡುತ್ತಿದ್ದೆ. ಬೇರೆ ರಾಜ್ಯಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ ಎಂದರು.