SHARE

ಬೆಳಗಾವಿ: ನಗರದ ಹಿರಿಯ ಧುರೀಣ, ಚಿನ್ನದ ಉದ್ಯಮಿ ಸುನೀಲ ಪೋತದಾರ ಇಂದು ಬೆಳಿಗ್ಗೆ ನಿಧನರಾದರು. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಚಿನ್ನದ ವ್ಯಾಪಾರಿಯಾಗಿದ್ದ ಅವರು ‘ಪೋತದಾರ ಜೆವಲರ್ಸ್’ ಅಂಗಡಿ ಮೂಲಕ ಹೆಸರಾಗಿದ್ದರು. ಸಮಾಜಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಸುನೀಲ ಪೋತದಾರ ಅವರ ನಿಧನಕ್ಕೆ ಗಣ್ಯರು ಹಾಗೂ ಸಾರ್ವಜನಿಕರು ಶೋಕ ವ್ಯಕ್ತಪಡಿಸಿದ್ದಾರೆ.