SHARE

ಅಥಣಿ: ಶಾಸಕ ಮಹೇಶ್ ಕುಮಠಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನ ಖಂಡಿಸಿ ಅಥಣಿ ಕಾಂಗ್ರೆಸ್‌ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ರಾಜಿನಾಮೆ ಹಿಂಪಡೆಯುವಂತೆ ವತ್ತಾಯಿಸಿ ಇಂದು ಪ್ರತಿಭಟನೆ ನಡೆಸಿದರು. ಕುದುರೆ ವ್ಯಾಪಾರ ನಡೆಸಿ ಮೈತ್ರಿ ಸಕಾ೯ರ ಬಿಳಿಸಲು ಮುಂದಾದ ಬಿಜೆಪಿಗೆ ಧಿಕ್ಕಾರ ಮಹೇಶ ಅಣ್ಣಾ ಮರಳಿ ಬನ್ನಿ ಎಂದು ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಎ ಕೆ ಹೈಸ್ಕೂಲ್ ಆವರಣದಿಂದ ನಡೆದ ಪ್ರತಿಭಟನೆ ಕುಮಠಳ್ಳಿ ನಿವಾಸಕ್ಕೆ ತೆರಳು ತ್ತಿದ್ದಂತೆ ಪೋಲಿಸರು ತಡೇದರು. ಪೋಲಿಸರು ತಡೆದದನ್ನು ಖಂಡಿಸಿ ಒಂದು ಘಂಟೆ ಕಾಲ ಸಂಕೆಶ್ವರ ಜೆವಗಿ೯ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಯಾವುದೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಭದ್ರತೇಗಾಗಿ KSRP, DR ಪೋಲಿಸ್ ತುಕಡಿಗಳನ್ನ ನೀಯೋಜಿಸಲಾಗಿತ್ತು.

ರಾಜಿನಾಮೆ ಹಿಂಪಡೆದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವಂತೆ ನೂರಾರು ಕಾಯ೯ಕತ೯ರು ಕುಮಠಳ್ಳಿವರ ಸಹೋದರರಿಗೆ ಮನವಿಪತ್ರ ಸಲ್ಲಿಸಿದ್ದು ವಿಷೇಶವಾಗಿತ್ತು.