SHARE

ನವದೆಹಲಿ: 10 ಅತೃಪ್ತ ಶಾಸಕರು ಸಲ್ಲಿಸಿರೋ ರಾಜೀನಾಮೆ ಬಗ್ಗೆ ಗುರುವಾರ ಸಂಜೆ 6 ಘಂಟೆ ವರೆಗೆ ನಿರ್ಧಾರ ಮಾಡಬೇಕು ಅಂತ ಸ್ಪೀಕರ್​​ ಕಚೇರಿಗೆ ಸುಪ್ರೀಂ ಕೋರ್ಟ್​ ನಿರ್ದೇಶಿಸಿತ್ತು. ಆದರೆ “ರಾಜೀನಾಮೆ ಬಗ್ಗೆ ಅಧ್ಯಯನ ಮಾಡಲು ಸಮಯ ಬೇಕು ಅಂತ ಕೋರ್ಟ್​ಗೆ ಸ್ಪೀಕರ್ ತಿಳಿಸಿದ್ದರು. ಹಾಗೇ ಅತೃಪ್ತರು ಸುಪ್ರೀಂ ಕೋರ್ಟ್​ಗೆ ಹೋಗಿದ್ದು ಯಾಕೆ ಅಂತ ಸ್ಪೀಕರ್​ ಪ್ರಶ್ನೆ ಮಾಡಿದ್ದರು.

ಇಂದು ಇದಕ್ಕೆ ಸುಪ್ರೀಂ ಕೋರ್ಟ್ ನಲ್ಲಿ​ ವಾದ ಮಂಡನೆ ಆದ ಬಳಿಕ ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ವಿಚಾರದಲ್ಲಿ ಯಥಾ ಸ್ಥತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.