SHARE

ಬೆಳಗಾವಿ: ನೇಸರಗಿ ಅರಣ್ಯ ವಲಯದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖಾ ಜಂಟಿ ಕಾರ್ಯದರ್ಶಿ ಗಿರೀಶ ಹೊಸೂರ ಸಸಿ ನೆಟ್ಟರು. ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಜಂಟಿ ಕಾರ್ಯದರ್ಶಿ ಸವದತ್ತಿ ತಾಲೂಕಿನ ಅರಣ್ಯ ವಲಯ ಪರಿಶೀಲನೆ ನಡೆಸಿ ಜಲಶಕ್ತಿ ಅಭಿಯಾನದ ಅಂಗವಾಗಿ ಸಸಿ ನೆಟ್ಟರು. ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಸಿಇಓ ಡಾ. ರಾಜೇಂದ್ರ ಕೆ. ವಿ, ಡಿಸಿಎಫ್ ಎಂ. ವಿ. ಅಮರನಾಥ, ಅಶೋಕ ಪಾಟೀಲ, ಆರ್ ಎಫ್ ಓ ನಾಗರಾಜ ಬಾಳೆಹೊಸೂರ, ಸುನಿತಾ ನಿಂಬರಗಿ ಉಪಸ್ಥಿತರಿದ್ದರು.