SHARE

ಬೆಂಗಳೂರು: ಅತೃಪ್ತ ಲಿಸ್ಟ್ ನಲ್ಲಿ ಸೇರಿದ ಶಾಸಕರಾದ ರೋಷನ್ ಬೇಗ್, ಮುನಿರತ್ನ, ಡಾ.ಸುಧಾಕರ್, ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ರಾಜೀನಾಮೆ‌ ಅಂಗೀಕಾರ ಮಾಡಲು ಸ್ಪೀಕರ್ ವಿಳಂಬ ಮಾಡ್ತಿದ್ದಾರೆ ಅಂತಾ ಈ ಐವರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ನಾವು ಸರ್ಕಾರದ ದುರಾಡಳಿತದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ವಾಪಾಸ್ ಪಡೆಯಲು ನಮ್ಮ ಮೇಲೆ ಒತ್ತಡ ಹಾಕಲಾಗ್ತಿದೆ ಅಂತಾ ಆರೋಪಿಸಿದ್ದಾರೆ. 10 ಅತೃಪ್ತ ಶಾಸಕರ ಅರ್ಜಿ ಜೊತೆ ತಮ್ಮ ಅಹವಾಲನ್ನೂ ಆಲಿಸವಂತೆ ಮನವಿ ಮಾಡಿದ್ದಾರೆ.