SHARE

ಬೆಳಗಾವಿ: ಎಸ್ಪಿ ಸುಧೀರಕುಮಾರ ರೆಡ್ಡಿ ಅವರನ್ನು ಸರಕಾರ ವರ್ಗಾಯಿಸಿದ್ದು, ನೂತನ ಎಸ್ಪಿಯಾಗಿ ಲಕ್ಷ್ಮಣ ನಿಂಬರಗಿ ಅವರನ್ನು ನೇಮಿಸಿದೆ. ಬಳ್ಳಾರಿ ಎಸ್ಪಿಯಾಗಿದ್ದ ಲಕ್ಷ್ಮಣ ನಿಂಬರಗಿ ದೊಡ್ಡ ಜಿಲ್ಲೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಸುಧೀರಕುಮಾರ ರೆಡ್ಡಿ ಅವರಿಗೆ ಸರಕಾರ ಮುಂದಿನ ಹುದ್ದೆ ತೋರಿಸಿಲ್ಲ. ನೂತನ ಎಸ್ಪಿ ಲಕ್ಷ್ಮಣ ನಿಂಬರಗಿ, ಬೆಳಗಾವಿ-ಗೋಕಾಕ ಅರಣ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ ಎಫ್ ಓ ಸುನಿತಾ ನಿಂಬರಗಿ ಅವರ ಸೋದರ ಸಂಬಂಧಿಯಾಗಿದ್ದಾರೆ.