SHARE

ಬೆಂಗಳೂರು: ಕಾಗವಾಡ ಕಾಂಗ್ರೆಸ್​​ ಶಾಸಕ ಶ್ರೀಮಂತ ಪಾಟೀಲ್ ರೆಸಾರ್ಟ್​ನಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್​ ಶಾಸಕರನ್ನ ನಿನ್ನೆ ದೇವನಹಳ್ಳಿ ಸಮೀಪದ ರೆಸಾರ್ಟ್​ಗೆ ಶಿಫ್ಟ್​ ಮಾಡಲಾಗಿತ್ತು. ನಿನ್ನೆ ರಾತ್ರಿ ಶ್ರೀಮಂತ ಪಾಟೀಲ್ ಹೊರಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್​​ನಿಂದ ಹೊರ ಬಂದವರು ಮತ್ತೆ ರೆಸಾರ್ಟ್‌ಗೆ ವಾಪಸ್ಸಾಗಿಲ್ಲ.

ಇಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿರೋ ಹಿನ್ನೆಲೆ, ಶ್ರೀಮಂತ ಪಾಟೀಲ್​ ಸದನಕ್ಕೆ ಗೈರಾಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರಿಗೆ ಹೆಚ್ಚಿದೆ.