SHARE

ಕಾರವಾರ: ಮಾಜಿ ಸೈನಿಕ ತನ್ನ ತಮ್ಮನ ಮಗ ಹಾಗೂ ತಮ್ಮನ ಹೆಂಡತಿಯ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕ ಸಾವುಕಂಡು ಆತನ ಸೋದರ ಸಂಬಂಧಿ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಠಾಕೇರಿ ಬಡಾವಣೆಯಲ್ಲಿ ನಡೆದಿದೆ.

ತಮ್ಮನ ಮಗ ಅನುಜ್ (೦೯) ಸ್ಥಳದಲ್ಲೇ ಸಾವು ಕಂಡಿದ್ದು ತಮ್ಮನ ಹೆಂಡತಿ ಮೇದಾ(೪೦) ಗಂಭೀರ ಗಾಯಗೊಂಡು ಮಣಿಪಾಲ್ ತಾಲೂಕು ಆಸ್ಪತ್ರೆಗೆ ಸಾಗಿಸುವ ದಾರಿ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಆಗಮಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.