SHARE

ಬೆಳಗಾವಿ: ಜಿಲ್ಲಾಡಳಿತದ ನೆರವಿಗೆ MLIRC ಧಾವಿಸಿ ಬಂದಿದ್ದು, ಕನ್ನಡಿಗ ಬ್ರಿಗೇಡಿಯರ್ ಗೋವಿಂದ ಕಲವಾಡ ಪ್ರವಾಹ ಪೀಡಿತರ ರಕ್ಷಣೆಗೆ 75ಜನ ಸೈನಿಕರನ್ನು ತತಕ್ಷಣ ಕಳಿಸಿದ್ದಾರೆ. ಸೈನ್ಯದ ಐದು ತಂಡಗಳು ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ, ಕಾಗವಾಡ, ಅಥಣಿ, ಖಾನಾಪುರ, ಗೋಕಾಕ ತಾಲೂಕಿನಲ್ಲಿ ಜನ ಜಾನುವಾರಗಳ ರಕ್ಷಣೆಗೆ ದುಡಿಯುತ್ತಿದ್ದಾರೆ.

SDRFನ ಐದು ತಂಡಗಳ 56ಜನ, NDRFನ ಐದು ತಂಡಗಳ 50ಜನ, ಅಗ್ನಿಶಾಮಕ 9 ತಂಡಗಳ ಹತ್ತೊಂಬತ್ತು ಜನ ಬೆಳಗಾವಿ ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಇಳಿದಿದ್ದಾರೆ. ಬೆಳಗಾವಿ MLIRC ಯೊಂದಿಗೆ ಜಿಲ್ಲಾಡಳಿತ ಅಗತ್ಯ ಸಹಕಾರದಲ್ಲಿದ್ದು, ಬೋಟ್ ವಾಹನ ಹಾಗೂ ಮತ್ತಿತರ ಸಹಾಯ ಸೌಲಭ್ಯ ಒದಗಿಸಲು ಮುಂದಡಿಯಿಟ್ಟಿದೆ.