SHARE

ಬೆಳಗಾವಿ: ಭೀಕರ ಮಳೆ & ಪ್ರವಾಹಕ್ಕೆ ಕಂಗೆಟ್ಟ ಜನತೆಯ ಭವನೆ ನೀಗಿಸಲು ಯುದ್ದೋಪಾಸಿ ಕೆಲಸ ನಡೆಯಬೇಕಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಇಂದು ನಗರದಲ್ಲಿ ಸಂತ್ರಸ್ತರನ್ನು ಭೇಟಿ ಆಗಿ ಸಾಂತ್ವನ ನೀಡಿದರು. ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕ ಎಂಬುವುದಿಲ್ಲ. ಅಖಂಡ ಕರ್ನಾಟಕವೇ ಪ್ರವಾಹಕ್ಕೆ ಮರುಗಿ ಪರಿಹಾರ ಸಾಮಗ್ರಿ ಒದಗಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಎರಡು ದಿನ ಸತತ ಪ್ರವಾಹ ಹಾಗೂ ಮಳೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಜನರ ಸಂಕಷ್ಟಕ್ಕೆ ನೆರವಾಗುವ ಬಲ ನಮಗಿದೆ. ಜನತೆಯ ಕಷ್ಟ ನೋಡಲು ಹೊಟ್ಟೆ ಉರಿಯುತ್ತಿದೆ. ಇಡೀ ದೇಶ ಮತ್ತು ರಾಜ್ಯ ಈಗ ಮಳೆ ಸಂತ್ರಸ್ತರಿಗೆ ಮನ ಮಿಡಿದಿದೆ. ನನ್ನ ಪ್ರವಾಸದ ವೇಳೆಯಲ್ಲಿ ಎಲ್ಲಿ ಆಗುತ್ತದೋ ಅಲ್ಲಿ ವಾಸ್ತವ್ಯ ಮಾಡುವೆ ಎಂದರು.

ಪರಿಹಾರ ಹಳೆ ಮೌಲ್ಯವಾಗದೇ ಹೊಸ ಮೌಲ್ಯ ಕೊಡಬೇಕು ಎಂದು ಸತಕಾರವನ್ನು ಒತ್ತಾಯಿಸಿದರು. ಜನತೆಗೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಪರಿಹಾರ ಸಾಮಗ್ರಿ ಬೆಂಗಳೂರಿಂದ ತರಲಾಗಿದೆ. ಅಕ್ಕಿ, ಬಟ್ಟೆ, ದಿನನಿತ್ಯ ಅಗತ್ಯತೆಯ ಸಾಮಗ್ರಿ ಜೆಡಿಎಸ್ ನೀಡುತ್ತಿದೆ. ಹೆಚ್ಚುವರಿ ಸಹಾಯ ಮಾಡಲಾಗುವುದು ಎಂದರು.