SHARE

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ನದಿಗಳ ಪ್ರವಾಹಕ್ಕೆ ಸಿಲುಕಿ ನೊಂದವರ ಅಳಲು ಆಲಿಸಿ ಅವಶ್ಯಕ ಸಾಮಗ್ರಿಗಳನ್ನು ಲಾಯನ್ಸಕ್ಲಬ್, ಬೆಳಗಾವಿ ಇವರ ಸಹಭಾಗಿತ್ವದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ರಾಮಚಂದ್ರಗೌಡ ಅವರು ವಿತರಿಸಿದರು.

ಅವರು ಬೆಳಗಾವಿಗೆ ಸಮೀಪವಿರುವ ಘೋಡಿಗೇರಿ ಗ್ರಾಮಕ್ಕೆ ಭೇಟಿ ನೀಡಿ ಸತತ ಆರು ದಿನಗಳಿಂದ ಹಿರಣ್ಯಕೇಶಿ ಮತ್ತು ಘಟಪ್ರಭಾ ನೀರಲ್ಲಿ ಮುಳಗಡೆಯಾದ ಜನರ ನೋವನ್ನು ಆಲಿಸಿ ಸಾಂತ್ವನ ಹೇಳಿದರು. ಬೆಳಗಾವಿ ಜಿಲ್ಲೆಯಾದ್ಯಾಂತ ನೊಂದ ಜನರ ಸೇವೆಗಾಗಿ ವಿಶ್ವವಿದ್ಯಾಲಯದ ಸಿಬ್ಬಂದಿಯವರಿಂದ ಒಂದು ದಿನದ ವೇತನ ನೀಡಲು ತೀರ್ಮಾನಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಲಾಯನ್ಸ ಅಧ್ಯಕ್ಷೆ ಭಾರತಿ ವಡವಿ, ಎನ್.ಎಸ್.ಎಸ್. ಸಂಯೋಜಕರಾದ ಪ್ರೊ.ಎಸ್.ಓ.ಹಲಸಗಿ, ಪ್ರೊ.ಚಂದ್ರಕಾಂತ ವಾಘಮೋರೆ ಮುಂತಾದವರು ಭಾಗವಹಿಸಿದ್ದರು.