SHARE

ಬೆಳಗಾವಿ: ಪ್ರವಾಹ ಪರಿಹಾರಕ್ಕೆ ಚರ್ಚಿಸಲು ಜಿಲ್ಲೆಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಸಭೆ ಗುರುವಾರ ಸಂಜೆ 5ಕ್ಕೆ ನಡೆಯಲಿದೆ. ನೂತನ ಸಚಿವರಾಗಿ ಇಂದು ಬೆಳಗಾವಿಗೆ ಬಂದಿಳಿದ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಈ ನಿರ್ಧಾರ ಪ್ರಕಟಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ಸಭೆ ನಡೆಸಿದ ಅವರು ಜಿಲ್ಲಾಡಳಿತ ಕೈಗೊಂಡ ಪ್ರವಾಹ ಸಂತ್ರಸ್ತರ ಪರಿಹಾರ ಮತ್ತು ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಹಾಳಾದ
ರಸ್ತೆಗಳು ಹಾಗೂ ಬ್ರಿಡ್ಜಗಳ ನಿರ್ಮಾಣ, ಸಂತ್ರಸ್ತರಿಗೆ ಪರಿಹಾರ, ಬದುಕು ಕಟ್ಟಿಕೊಳ್ಳುವವರೆಗೆ ಕನಿಷ್ಠ 6ತಿಂಗಳು ವಸತಿ ವ್ಯವಸ್ಥೆ, ಜಾನುವಾರುಗಳಿಗೆ ಮೇವು, ಕರೆಂಟ್ ದುರಸ್ಥಿ ಬಗ್ಗೆ ತೀವ್ರ ಗಮನ ಹರಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಆಯಾ ಇಲಾಖೆ ಅಧಿಕಾರಿಗಳು ಮೊಂಡು ನೆವ ಮಾಡದೇ ಕೆಲಸಗಳು ಸಮರ್ಪಕ ಆಗಲು ಎಡೆಬಿಡದೇ ದುಡಿಯಬೇಕು ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ ಸಿಂಗ್, ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ, ಕಮಿಷ್ನರ್ ಬಿ. ಎಸ್.ಪ ಲೊಕೇಶಕುಮಾರ, ಸಿಇಓ ಕೆ. ವಿ. ರಾಜೇಂದ್ರನ್, ಶಾಸಕ ಮಹಾಂತೇಷ ದೊಡ್ಡಗೌಡ್ರ ಇತರರು ಉಪಸ್ಥಿತರಿದ್ದರು.