SHARE

ಬೆಳಗಾವಿ: ಕೃಷ್ಣಾ, ಕೊಯ್ನಾ, ಪಂಚಗಂಗಾ ನದಿಗಳಿಗೆ ಕನಿಷ್ಠ 2ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗುವುದು ಎಂದು ಕೊಲ್ಲಾಪುರ ಜಿಲ್ಲಾಧಿಕಾರಿ ದೌಲತ್ ದೇಸಾಯಿ ಎಚ್ಚರಿಸಿದ್ದಾರೆ. ಬೆಳಗಾವಿ & ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು ಪಶ್ಚಿಮ ಘಟ್ಟದಲ್ಲಿ ಮಳೆಯಾಗುತ್ತಿದ್ದು, ಅದರ ತೀವ್ರತೆ ಮುಂದುವರೆದರೆ ಹೆಚ್ಚಿನ ನೀರು ಬಿಡಲಾಗುವುದು. ನದಿತಟದ ಜನತೆಯನ್ನು ಎಚ್ಚರಿಸಬೇಕು & ಆಣೆಕಟ್ಟೆಗಳ ನೀರಿನ ಮಟ್ಟ ಕಾಯ್ದುಕೊಳ್ಳಬೇಕು ಎಂದು ಕೋರಿದ್ದಾರೆ.