SHARE

ಬೆಳಗಾವಿ: ಕಬ್ಬೂರ ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸಿ ಮೀರಾಪೂರಹಟ್ಟಿ, ಚಿಕ್ಕೊಡಿ ರೋಡ್ & ಜೋಡಟ್ಟಿ ಗ್ರಾಮಗಳನ್ನು ಸೇರಿಸಿ ಪ್ರತ್ಯೇಕ ಗ್ರಾಪಂ. ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ಸರ್ಕ್ಯೂಟ್ ಹೌಸನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಹೈಕೋರ್ಟ್ ಆದೇಶದಂತೆ ‘ಮೀರಾಪೂರಹಟ್ಟಿ ಗ್ರಾ.ಪಂ’ ಎಂದು ಸರಕಾರ ಮುಂದುವರೆಸಬೇಕು. ಪಂಚಾಯಿತಿ ಆ್ಯಕ್ಟ್ ಪ್ರಕಾರ ಮೂಲಭೂತ ಸೌಲಭ್ಯಗಳನ್ನು ಮೀರಾಪೂರಹಟ್ಟಿ & ಜೋಡಟ್ಟಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕಬ್ಬೂರ ಪಟ್ಟಣ ಪಂಚಾಯಿತಿಯೆಂದು ಘೋಷಿಸಿ ನಮ್ಮ ಊರುಗಳನ್ನು ಅದರಲ್ಲಿ ಸೇರಿಸಿದ್ದರಿಂದ ಗ್ರಾಮೀಣ ಕೃಪಾಂಕ ಸಿಗುತ್ತಿಲ್ಲ. ಕಬ್ಬೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನಮ್ಮ ಗ್ರಾಮಗಳನ್ನು ಸೇರಿಸುವುದೆ ಬೇಡ. ನಮಗೆ ನಮ್ಮ ಮೀರಾಪುತಹಟ್ಟಿ ಪ್ರತ್ಯೇಕ ಗ್ರಾಪಂ. ಆಗಿ ಹಿಂದಿನಂತೆ ಮುಂದುವರೆಯಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರ ಬೇಡಿಕೆ & ನ್ಯಾಯಾಲಯದ ಆದೇಶಗಳಡಿ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತಾರೆ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು. ಶಿವಪ್ಪ ಲಾಲು ಸವದೆ, ಭೀಮಗೌಡ ಖೋತ, ಲಕ್ಷಮಣ ಸವದೆ, ಗಜು ಬಡಿಗೇರ, ವಿರೇಶ ಬಡಿಗೇರ, ಮಹೇಶ ಬೆಲ್ಲದ, ಕಲ್ಲಪ್ಪ ಕರಗಾವ, ಮಾರುತಿ ಖೋತ, ರಾಮಚಂದ್ರ ಶಾಹುಕರ, ನಿಂಗಪ್ಪ ಹಾದಿಮನಿ, ನವಲಪ್ಪ ಶಿರಗಪಗೋಳ, ಭೈರಪ್ಪ ಖೋತ ಇತರರು ಉಪಸ್ಥಿತರಿದ್ದರು.