SHARE

ಬೆಳಗಾವಿ: ಇಬ್ಬರೂ ವಿದ್ಯಾರ್ಥಿಗಳ ಪೈಕಿ ಒಬ್ಬ ಎಸ್ಸೆಸ್ಸೆಲ್ಸಿ ಪಾಸ್ ಆದ, ಮತ್ತೊಬ್ಬ್ ಫೇಲ್ ಆದ! ಪಾಸ ಆದ ಜಾಣ ವಿದ್ಯಾರ್ಥಿ ಮುಂದೆ ಓದಿ IAS ಮಾಡಿ ಮುಂದೆ ಚೀಫ್ ಸೆಕ್ರೆಟರಿ ಸಹ ಆದ. ಆದ್ರೆ ದಡ್ಡ ಫೇಲ್ ವಿದ್ಯಾರ್ಥಿ ಕೌನ್ಸಿಲರ್ ಆಗಿ, ಎಂಎಲ್ ಎ, ಮಂತ್ರಿ ಆಗಿ ಮುಂದೆ ಮುಖ್ಯಮಂತ್ರಿ ಸಹ ಆದ, ಈಗ ಯಾರ ಕೆಳಗಡೆ ಯಾರು ಕೆಲಸ ಮಾಡಬೇಕು ಮುಖ್ಯಮಂತ್ರಿ ಕೈಯಲ್ಲಿ ಮುಖ್ಯ ಕಾರ್ಯದರ್ಶಿ ಕೆಲಸ ಮಾಡಬೇಕಲ್ಲವೇ! ದಡ್ಡನ ಕೈಯಲ್ಲಿ ಐಎಎಸ್ ಅಧಿಕಾರಿ ಕೆಲಸ ಮಾಡಬೇಕಾಗುವುದು ಸಹಜ. ಆದರೆ ಓದಿ ಜ್ಞಾನ ಸಂಪಾದಿಸಿದ ಅಧಿಕಾರಿಗಳ ಕೌಶಲ್ಯದ ಮೇಲೆಯೇ ಮುಖ್ಯಮಂತ್ರಿ & ಸರಕಾರದ ಕಾರ್ಯವೈಖರಿ ಇರುತ್ತದೆ. ಅಧಿಕಾರಿಗಳೇ ಸರಕಾರ ರೂಪುರೇಷೆ, ನೀತಿ ನಿರ್ಧಾರ ಮಾಡಿ ಸರಕಾರವನ್ನು ಜನಪ್ರತಿನಿಧಿಗಳ ಮೂಲಕ ನಡೆಸುತ್ತಾರೆ. ಆದ್ದರಿಂದ ರಾಜ್ಯದ ಸಿಇಓಗಳ ಮೇಲೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ, ಸಲಹೆ ನೀಡಿ ಮುನ್ನಡೆಸುವ ಅಪರಿಮಿತ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂದು ಮಾರ್ಮಿಕವಾಗಿ ತಮ್ಮ ಕಾಲೇಜು ದಿನದ ಪ್ರಿನ್ಸಿಪಾಲರು ಹೇಳಿದ್ದ ಕಥೆ ಉಲ್ಲೇಖಿಸಿ ರಾಜ್ಯದ ಸಿಇಓಗಳಿಗೆ ಸಚಿವ ಈಶ್ವರಪ್ಪ ಇಂದು ಸಲಹೆ ನೀಡಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಜವಾಬ್ದಾರಿ ಮತ್ತು ಹೊಸತನ ಸೃಷ್ಟಿಸುವ ಅನಿವಾರ್ಯತೆ ಹೇಳುವ ಕಳಕಳಿ ಸಚಿವ ಈಶ್ವರಪ್ಪ ಸುವರ್ಣಸೌಧದಲ್ಲಿ ರಾಜ್ಯದ ಜಿಪಂ. ಸಿಇಓಗಳ ಸಭೆಯಲ್ಲಿ ವ್ಯಕ್ತಪಡಿಸಿದ ವ್ಯಕ್ತಪಡಿಸಿದರು.