SHARE

ಬೆಳಗಾವಿ: ಕಾಕತಿಯ ಸಿದ್ದೇಶ್ವರ ನಗರದಲ್ಲಿ ಬೆಳಂಬೆಳಿಗ್ಗೆ ರಘುವೀರ ಕುಂಬಾರ (25) ಎಂಬ ಕಿರಾತಕ ಮಗನೊಬ್ಬ ತನ್ನ ಹೆತ್ತ ತಂದೆಯನ್ನೇ ಇಳಿಗೆ ಮನೆಯಿಂದ ಇರಿದು, ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿ ಬೇರ್ಪಡಿಸಿದ್ದಾನೆ. ಕೊಲೆಯಾದ ವ್ಯಕ್ತಿ ಶಂಕರಪ್ಪಾ ಕುಂಬಾರ (60) ನಿವೃತ್ತ ಸಶಸ್ತ್ರ ಪಡೆ ಪೋಲಿಸ್ ಅಧಿಕಾರಿ. ಸಿದ್ದೇಶ್ವರ ನಗರದಲ್ಲಿ ವಾಸವಾಗಿದ್ದರು. ಶಂಕರಪ್ಪ ಅವರು ಕಳೆದ 3 ತಿಂಗಳ ಹಿಂದೆ ಪೋಲಿಸ್ ಸೇವೆಯಿಂದ ನಿವೃತ್ತಿಗೊಂಡಿದ್ದರು. ನಿನ್ನೆ ಇವರ ಮಗ ರಘುವೀರ ಸದಾ ಮೊಬೈಲ್ ನಲ್ಲಿ ಮಳುಗಿದ್ದನ್ನು ಕಂಡು ಬುದ್ದಿವಾದ ಹೇಳಿದ್ದಾರೆ. ಕುಪಿತನಾದ ಮಗ ಈ ಕೃತ್ಯ ಎಸಗಿರುವುದು ಗಮನ ಸೆಳೆದಿದೆ.