SHARE

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಕುಟುಂಬದವರಿಗೆ ₹10,000 ನೀಡುವ ಪರಿಹಾರ ನೀಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬುಧವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಒಂದು ಲಕ್ಷ ಹತ್ತು ಸಾವಿರ ಜನರಿಗೆ ಹತ್ತು ಸಾವಿರ ಕೊಡುವ ಕೆಲಸ ಮುಗಿದಿದೆ. ಮನೆಗಳು ಹಾಳಾಗಿದ್ದವರಿಗೆ ಫೌಂಡೇಷನ್ ಹಾಕಿಕೊಡಲು ಒಂದು ಲಕ್ಷ ತಕ್ಷಣ ಬಿಡುಗಡೆ ಮಾಡಲು ಡಿಸಿಗೆ ಸೂಚನೆ ನೀಡಿದ್ದೇನೆ ಎಂದರು. ವಾಸಲು ಯೋಗ್ಯವಿಲ್ಲದವರಿಗೆ ಐವತ್ತು ಸಾವಿರ ಕೊಡುತ್ತೇವೆ. ಮೃತ ಮುಸ್ಲಿಂ ಬಾಲಕ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ತತಕ್ಷಣ ಐದು ಲಕ್ಷ ಪರಿಹಾರ ನೀಡುವೆ ಎಂದರು. ಪ್ರವಾಹ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರ ಬೆಳೆಗಳು ಹಾನಿಯಾಗಿದೆ. ಈ ಕುರಿತು ಕೇಂದ್ರದ ಸರಕಾರದ ಸಹಕಾರ ಎಷ್ಟಿದೆ ಎನ್ನುವುದು ನೋಡಿ ಕೊಂಡು ಸರಿಯಾದ ಪರಿಹಾರ ಕೊಡುವ ಕೆಲಸ ಮಾಡಲಾಗುವುದು ಎಂದರು.

ಹಿಂದು ಯುವಕ ಶಿವು ಉಪ್ಪಾರ ಸಾವಿನ ತನಿಖೆಯನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಅವರ ಕುಟುಂಬಕ್ಕೆ‌ ನ್ಯಾಯ ಒದಗಿಸಿಕೊಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದರು.

ರೈತರಿಗೆ ಸರಿಯಾದ ಪರಿಹಾರ ಕೊಡುತ್ತೇವೆ‌.ಡ್ಯೂಟಿಯಲ್ಲಿದ್ದ ಪಿಎಸ್ಐ ಗೆ ತಕ್ಷಣ ಪರಿಹಾರ ಕೊಡುತ್ತೇವೆ.ರಾಜ್ಯದ ಅಭಿವೃದ್ಧಿ ಕಾರ್ಯ ಸ್ಥಗಿತ ಆದರೂ ಪರಿಹಾರ ಕೊಡುತ್ತೇವೆ. ದೆಹಲಿ ಪ್ರವಾಸ ರದ್ದು ಮಾಡಿ ನಿರಾಶ್ರಿತ ಸಮಸ್ಯೆ ಆಲಿಸಲು ಬಂದಿದ್ದೇನೆ ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ,ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಪ್ರಭಾಕರ ಕೋರೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅನಿಲ್ ಬೆನಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.