SHARE

ಬೆಳಗಾವಿ: ಪರಿಸರ ಕಾಯುವ ಕಾಯಕದಲ್ಲಿದ್ದಾಗ ಮೃತ ಅರಣ್ಯ ಸಿಬ್ಬಂಧಿಗಳ ಗೌರವಾರ್ಥ ಹುತಾತ್ಮ ದಿನಾಚರಣೆ ಇಂದು ಅರಣ್ಯ ಭವನದಲಿ ನಡೆಯಿತು. ನಗರದ ಅರಣ್ಯ ಭವನದಲ್ಲಿ ಬೆಳಗಾವಿ ವೃತ್ತದ ಸಿಸಿಎಫ್ ಪಿ. ಬಿ. ಕರುಣಾಕರ ಹುತಾತ್ಮ ಸ್ಥಂಬಕ್ಕೆ ಹೂಗುಚ್ಛ ಸಲ್ಲಿಸಿ ಗೌರವ ಸಲ್ಲಿಸಿದರು.

ಅರಣ್ಯ ರಕ್ಷಣೆ ಇಂದು ಆಧುನಿಕ ಸರಕಾರಗಳಿಗೆ ಮತ್ತು ನಾಗರಿಕತೆಯ ಅನಿವಾರ್ಯತೆ ಆಗಿದೆ. ಪರಿಸರ ಸಮತೋಲನಕ್ಕೆ ಅರಣ್ಯ ಕಾಯುವ ಜವಾಬ್ದಾರಿ ಹೊತ್ತ ಸಿಬ್ಬಂಧಿ ಪ್ರಾಣಿದಾಳಿ, ಅರಣ್ಯಗಳ್ಳರ ದಾಳಿ ಹಾಗೂ ನೈಸರ್ಗಿಕ ವಿಕೋಪಕ್ಕೆ ಜೀವ ಕಳೆದುಕೊಳ್ಳಬೇಕಾಗುತ್ತದೆ. ಅರಣ್ಯ ಸಂರಕ್ಷಣೆಗೆ ಅವರ ಬದ್ಧತೆಯನ್ನು ಗಮನಿಸಿದಾಗ ಅವರ ಸೇವೆಗೆ ಬೆಲೆಕಟ್ಟಲಾಗದು ಎಂದು ಸಿಸಿಎಫ್ ನುಡಿದರು. ಅರಣ್ಯ ಸಿಬ್ಬಂಧಿ ಗೌರವದನೆ ಸಲ್ಲಿಸಿದರು. ಕೆಎಸ್ ಆರ್ ಪಿ ಬ್ಯಾಂಡ ತಂಡ ಆಕರ್ಷಕ ವಾಧಯಮೇಳ ನಡೆಸಿ ಕುಶಾಲುತೋಪು ಹಾರಿಸಿತು.
ಡಿಸಿಎಫ್ ಎಸ್. ಕೆ. ಕಲ್ಲೊಳಿಕರ, ಎಸಿಎಫ್ ಅಶೋಕ ಮಾದರ, ಎಸಿಎಫ್ ಎಸ್. ಎಂ. ಸಂಗೊಳ್ಳಿ, ಸಿ. ಜಿ. ಮಿರ್ಜಿ, ಖನದಾಳೆ, ಸಂತೋಷ ದೇಸಾಯಿ, ಆರ್. ಎಚ್. ಡೊಂಬರಗಿ, ಅನಿಲ ಬಿರಾದಾರ ಇತರರು ಉಪಸ್ಥಿತರಿದ್ದರು.

ಕೈಕೊಟ್ಟ ಕಮಿಷ್ನರ್, ಎಸ್ಪಿ:ಹುತಾತ್ಮರ ದಿನಾಚರಣೆ ಆಕರ್ಷಕವಾಗಿ ಸಂಘಟಿಸಿ ಆಹ್ವಾನಿಸಿದ್ದ ಅರಣ್ಯ ಇಲಾಖೆಗೆ ಕೊನೆ ಕ್ಷಣದಲ್ಲಿ ನಗರ ಪೊಲೀಸ್ ಆಯುಕ್ತ ಬಿ. ಎಸ್. ಲೊಕೇಶಕುಮಾರ ಹಾಗೂ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ತಮ್ಮ ಇಲಾಖೆಯ ಕೆಲಸ ಹೇಳಿಕೊಂಡು ಕೈಕೊಟ್ಟರು. ಮುಖ್ಯ ಅತಿಥಿಗಳು ಕೈ ಕೊಟ್ಟಿದ್ದು ತುಸು ಅಸಮಧಾನ ಸೃಷ್ಟಿಸಿತು. ಒಂದು ತಾಸು ತಡವಾಗಿ ಹುತಾತ್ಮ ದಿನಾಚರಣೆ ಪ್ರಾರಂಭವಾಯಿತು. ಸಿಸಿಎಫ್ ಕರುಣಾಕರನ್ ಗೌರವ ವಂದನೆ ಸಲ್ಲಿಸಿದರು.