SHARE

ಬೆಳಗಾವಿ: ಬೆಳಗಾವಿ, ಹುಬ್ಬಳ್ಳಿ,-ಧಾರವಾಡ ಸೇರಿಸಿ ಅಭಿವೃದ್ಧಿ ಮಾಡುವುದಾಗಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲನಲ್ಲಿ ಕರ್ನಾಟಕ – ಮಹಾರಾಷ್ಟ್ರದ ಉದ್ಯಮಿಗಳ ಸಮಾವೇಶ ನಡೆಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಹೆಚ್ಚಿನ ಆದ್ಯತೆ ಮೇಲೆ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು, ಹೊಸ ಕೈಗಾರಿಕಾ ನೀತಿ ಮುಂಬರುವ ನವೆಂಬರ್ -ಡಿಸೆಂಬರ್ ನೊಂದಿಗೆ ಜಾರಿಗೆ ತರಲಾಗುವುದು, ಬೇರೆ ರಾಜ್ಯಗಳ ಕೈಗಾರಿಕೆ ನೀತಿ ಅಭ್ಯಸಿಸಲಾಗುವುದು ಎಂದರು.