SHARE

ಬೆಳಗಾವಿ: ರಾಮದುರ್ಗ ಹಲಗತ್ತಿ ಗ್ರಾಮದ ರಮೇಶ ನೀಲಕಂಠಪ್ಪ(೩೮) ಹವಳಕೋಡ ಎಂಬ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ 56 ಮಗ್ಗಗಳು ಮಳೆಗೆ ಸಂಪೂರ್ಣವಾಗಿ ನಾಶವಾಗಿದ್ದು ಈ ಪೈಕಿ ರಮೇಶನಿಗೆ ಸೇರಿದ ಎರಡು ಮಗ್ಗಗಳೂ ಇದ್ದು. ಇವನ ಮನೆಯೂ ಸಹ ಬಿದ್ದುಹೋಗಿತ್ತು. ಬಿದ್ದ ಮನೆಯಲ್ಲಿಯೇ ಅವನು ಆತ್ಮಹತ್ಯೆ ಮಾಡಿಕೊಂಡಿದ್ದು ಅವನಿಗೆ ಪತ್ನಿ ಮತ್ತು ಓರ್ವ ಪುತ್ರಿ ಇದ್ದಾಳೆ. ಧರ್ಮಸ್ಥಳ ಸಂಘ ಹೆಸರಿನ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಇವನು ಸಾಲ ಪಡೆದಿದ್ದಾನೆ.

ಜವಳಿ ಇಲಾಖೆಯವರು ಇತ್ತೀಚೆಗೆ ಗ್ರಾಮಕ್ಕೆ ಬಂದು ಹಾಳಾದ ಮಗ್ಗಗಳ ಸಮೀಕ್ಷೆ ಮಾಡಿ ಹೋಗಿದ್ದಾರೆ. ಆದರೆ ಆ ನಂತರ ಸರಕಾರ ಯಾವದೇ ಪರಿಹಾರ ಪ್ರಕಟಿಸಿಲ್ಲ. ಇಂದಿನ ಘಟನೆಯ ಬಗ್ಗೆ ರಾಮದುರ್ಗದಲ್ಲಿ ತೀವ್ರ ದುಃಖದ ವಾತಾವರಣ ಉಂಟಾಗಿದ್ದು ದುಡಿಯುವ ಆಧಾರಗಳನ್ನೇ ಕಳೆದುಕೊಂಡವರಿಗೆ ಮುಂದೇನು ಎಂಬ ಚಿಂತೆ ಉಂಟಾಗಿದೆ.