SHARE

ಕಿತ್ತೂರು: ಸತೀಶ್ ಜಾರಕಿಹೊಳಿ ಸಂಘದ ಅಧ್ಯಕ್ಷರಾದ ಹಬೀಬ್ ಶಿಳ್ಳೆದಾರ್ ರವರ 46 ನೇ ಹುಟ್ಟುಹಬ್ಬದ ಪ್ರಯುಕ್ತ ಕಿತ್ತೂರಿನ ಅಂಬಡಗಟ್ಟಿಯ ಸತೀಶ್ ಅಣ್ಣಾ ಕಲ್ಯಾಣ ಮಂಟಪದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸತೀಶ್ ಜಾರಕಿಹೊಳಿ ಅವರ ಆಶೀರ್ವಾದ ದೊಂದಿಗೆ ಕಿತ್ತೂರು ರಾಜಗುರು ಸಂಸ್ಥಾನದ ಕಲ್ಮಠದ ಶ್ರೀ ಮಡಿವಾಳ ರಾಜ ಯೋಗೇಂದ್ರ ಮಹಾ ಸ್ವಾಮಿಗಳು, ನಿಚ್ಚಣಕಿ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಮುಸ್ಲಿಂ ಧರ್ಮ ಗುರುಗಳಾದ ಜನಾಬ್ ಇಕ್ಬಾಲ್ ಅಹಮದ್ ಸಿದ್ದಿಕಿ ಮತ್ತು ಜನಾಬ್ ಲಿಯಾಕತ್ ಮಕಾಂದರ್, ಜನಾಬ್ ಮುಬಾರಕ್ ಬೆಂಗಳೂರು ಧರ್ಮ ಗುರುಗಳ ದಿವ್ಯ ಸಾನಿಧ್ಯದಲ್ಲಿ, ಕಿತ್ತೂರಿನ ಜನಪ್ರಿಯ ಮುಖಂಡರಾದ ಶ್ರೀ ಬಾಬಾ ಸಾಹೇಬ ಪಾಟೀಲ್ ರವರು, ಶಂಕರ್ ಹೊಳಿಯವರು, ನಿರ್ದೇಶಕರಾದ ಶಿವನಗೌಡ ಪಾಟೀಲ್, ನಿಂಗಪ್ಪ ಹಂಜಿ ಹಾಗೂ ಎಲ್ಲಾ ಗೆಳೆಯರ ಬಳಗ, ಕಿತ್ತೂರಿನ ತಾಲ್ಲೂಕಿನ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳ ಅಮೂಲ್ಯ ಹಸ್ತದೊಂದಿಗೆ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ ಮಾತನಾಡಿದ ಹಬೀಬ್ ಶಿಳ್ಳೆದಾರ್ ರವರು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಬಹುಮುಖ ಪ್ರತಿಭೆಗಳು ಇದ್ದು, ಅವರನ್ನು ಗುರುತಿಸಿ ಪ್ರೋತ್ಸಾಹ ಮಾಡಿ ಬೆಳೆಸುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಿತ್ತೂರಿನ ಹಲವಾರು ವಿವಿಧ ಕ್ಷೇತ್ರಗಳ ಗಣ್ಯರಿಗೆ, ಸಾಧಕರಿಗೆ ಸನ್ಮಾನ ಮಾಡಲಾಯಿತು.