SHARE

ಬೆಳಗಾವಿ: ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಅಹೋರಾತ್ರಿ ಡಿಸಿ ಕಚೇರಿ ಎದುರು ನಡೆದ ರೈತರ ಧರಣಿ ಎರಡನೇ ದಿನ ಇಂದು ಮುಂದುವರೆಯಿತು. ತಡರಾತ್ರಿ ರೈತ ಮಹಿಳೆಯರಿಬ್ಬರು ಅಸ್ವಸ್ಥ ರಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಸುರೇಖಾ ಕಾಬೊಚಿ(೪೦) ಮತ್ತು ಪಾರ್ವತಿ ಕಡಚಟಗಿ (೬೦) ಎಂಬಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

ರೈತ ಮುಖಂಡರು ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಲಾಗಿ ಜವಾಬ್ದಾರಿಯಿಂದ ಅವರು ನುಣುಚಿಕೊಂಡರು ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಆರೋಪಿಸಿದರು. ತಾನು ಬಳ್ಳಾರಿಗೆ ನಿಯೋಜನೆಗೊಂಡಿದ್ದು, ಬೆಳಗಾವಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದಿದ್ದಾರೆ ಎನ್ನಲಾಗಿದೆ. ಇಂದು ಜಿಲ್ಲಾಧಿಕಾರಿ ಬ್ಯಾಂಕರ್ಸ್ ಸಭೆ ಕರೆದಿದ್ದು ಸಾಲ ಕಿರುಕುಳ ನೀಡದಂತೆ ಎಚ್ಚರಿಸಲಿದ್ದಾರೆ. ಖುದ್ದು ಮುಖ್ಯಮಂತ್ರಿ ಆಗಮಿಸುವವರೆಗೆ ಧರಣಿ ಮುಂದುವರೆಯಲಿದೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.