SHARE

ನವದೆಹಲಿ: ಕರ್ನಾಟಕದ 15 ಅನರ್ಹ ಶಾಸಕರ ವಿಧಾನಸಭಾ ಕ್ಷೆತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 21ರಂದು ಚುನಾವಣೆ ದಿನಾಂಕ್ ಫಿಕ್ಸ್ ಆಗಿದೆ. ಅಕ್ಟೋಬರ್ 24 ರಂದು ಫಲಿಂತಾಶ ಪ್ರಕಟವಾಗಲಿದೆ.

ಉಪಚುನಾವಣೆ ಕ್ಷೆತ್ರಗಳು
1. ಗೋಕಾಕ್
2. ಅಥಣಿ
3. ಕಾಗವಾಡ
4. ಶಿವಾಜಿ ನಗರ್
5. ಮಹಾಲಕ್ಷ್ಮಿ ಲೇಔಟ್
6. ವಿಜಯ್ ನಗರ್
7. ಯಶ್ವನಂತಪುರ್
8. ಕೆ. ಆರ್.ಪುರ್
9. ಹೊಸಕೋಟೆ
10. ಚಿಕ್ಕಬಳ್ಳಾಪುರ
11.ಹಿರೇಕೆರೂರ
12. ಹುಣಸೂರು
13.ಕೆ.ಅರ.ಪೇಟೆ
14. ರಾಣಿಬೆನ್ನೂರ್
15. ಯಲ್ಲಾಪುರ

ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಅಕ್ಟೋಬರ್​ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್​ 24ಕ್ಕೆ ಫಲಿತಾಂಶ ಹೊರ ಬೀಳಲಿದೆ. ಇದೇ ವೇಳೆ ರಾಜ್ಯದ 17 ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ಹಾಲಿ ವಿಧಾನಸಭಾ ಅವಧಿ ನವೆಂಬರ್​ 9 ಹಾಗೂ ಹರಿಯಾಣ ಹಾಲಿ ವಿಧಾನಸಭಾ ಅವಧಿ ನ.2ರಂದು ಪೂರ್ಣಗೊಳ್ಳಲಿದೆ.

ಎರಡೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿದ್ದರು. ಚುನಾವಣೆಯನ್ನು ಶಾಂತ ರೀತಿಯಲ್ಲಿ ನಡೆಸಲು ಹೆಚ್ಚಿನ ಭದ್ರತೆ ನಿಯೋಜಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್​ ಅರೋರಾ ಹೇಳಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಸರ್ಕಾರ ಯಾವುದೇ ಹೊಸ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ.