SHARE

ಬೆಳಗಾವಿ: ಹಸಿ ಹಾಗೂ ಒಣ ವಿಂಗಡಣೆಗೆ ಸಿದ್ದವಾದ ನೂತನ ವಾಹನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವ ಸುರೇಶ ಅಂಗಡಿ ಇಂದು ಚಾಲನೆ ನೀಡಿದರು. ಸ್ಥಳೀಯ ಸಂಸ್ಥೆಗಳಿಗೆ ಕಸ ವಿಂಗಡನೆ ಅನಿವಾರ್ಯವಾದದ್ದು, ಜನತೆಗೆ ಹೆಚ್ಚಿನ ತಿಳಿವಳಿಕೆ ನೀಡಿ ಕಸದ ಸಮರ್ಪಕ ವಿಲೇವಾತಲರಿ ಯತ್ನ ಸಫಲವಾಗಬೇಕು ಎಂದು ಸಚಿವರು ಕರೆ ನೀಡಿದರು. ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಎಸ್ಪಿ ಲಕ್ಷ್ಮಣ ನಿಂಬರಗಿ ಇತರರು ಉಪಸ್ಥಿತರಿದ್ದರು.