SHARE

ಬೆಳಗಾವಿ: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಕೆಲಸಗಳ ಬಗ್ಗೆ ಸಚಿವ ಜಗದೀಶ ಶೆಟ್ಟರ ಇಂದು ಮಾಹಿತಿ ಪಡೆದುಕೊಂಡರು. ₹125ಕೋಟಿ ಹಣದ ಉಪಯೋಗದ ಬಗ್ಗೆ ಚರ್ಚೆ ನಡೆಯಿತು. ಉತ್ತರಕ್ಕೆ ಹೋಲಿಸಿದರೆ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಹೆಚ್ಚಿನ ಹಣ ಸಿಗುತ್ತಿಲ್ಲ ಎಂದು ಶಾಸಕ ಅಭಯ ಪಾಟೀಲ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟರು. ಕಳೆದ 5ವರ್ಷದಲ್ಲಿ ಬಂದ ಹಣ ಬರೀ ಉತ್ತರಕ್ಕೆ ಖರ್ಚಾಗುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ಮುಖ ಎತ್ತಿ ಅಡ್ಡಾಡುವಂತಿಲ್ಲ. ನನ್ನ ಕ್ಷೇತ್ರದ ರಸ್ತೆಗಳು ನಳೆ‌ಮತ್ತು ನಾಲೆಗಳ ಉಬ್ಬರಕ್ಕೆ ತೀರಾ ಕೆಟ್ಟಿವೆ. ಕೂಡಲೇ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣ ಕೊಡಬೇಕು ಎಂದು ಆಗ್ರಹಿಸಿದರು. ಹಣ ಉಪಯೋಗದ ಯೋಜನೆ ನಿಯಮಾವಳಿಗಳ‌ ಆಚೆ ಹೆಚ್ಚಿನ ಹಣ ಪಡೆಯಲು ನೇರವಾಗಿ ಮುಖ್ಯಮಂತ್ರಿ & ನಗರಾಭಿವೃದ್ಧಿ ಕಾರ್ಯದರ್ಶಿಗೆ ಪ್ರಸ್ತಾವೇ ಸಲ್ಲಿಸಲು ಪಾಲಿಕೆ ಕಮುಷ್ನರ್ ಗೆ ಸಚಿವ ಶೆಟ್ಟರ ಸೂಚಿಸಿದರು. ಆರ್ ಸಿ ಅಮ್ಲಾನ ಆದಿತ್ಯ ಬಿಸ್ವಾಸ್, ಡಿಸಿ ಬೊಮ್ಮನಹಳ್ಳಿ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.