SHARE

ಬೆಳಗಾವಿ: 65ನೇ ವನ್ಯಜೀವಿ ಸಪ್ತಾಹ ನಿಮಿತ್ತ ಅರಣ್ಯ ಇಲಾಖೆ‌ ಏರ್ಪಡಿಸಿದ್ದ ಸೈಕಲ್ ರ್ಯಾಲಿಗೆ MLIRC ಡೆಪ್ಯುಟಿ ಕಮಾಂಡಂಟ್ ಕರ್ನಲ್ ಪಿ. ಎಲ್. ಜಯರಾಮ ಚಾಲನೆ‌ ನೀಡಿದರು. ನಗರದ ಅರಣ್ಯ ಇಲಾಖೆ ಆವರಣದಿಂದ ಎಂಎಲ್ ಐಆರ್ ಸಿ ಯೋಧರು, ಅರಣ್ಯಾಧಿಕಾರಿಗಳು ಹಾಗೂ ನಾಗರಿಕರು ವನ್ಯಜೀವಿ ರಕ್ಷಣೆ & ಅದರ ಮಹತ್ವ ಕುರಿತು ಸಂದೇಶ ಹೊತ್ತು ಮಚ್ಛೆ ಸಿಟಿ ಫಾರೆಸ್ಟ್ ಪಾರ್ಕ್ ವರೆಗೆ ಸೈಕಲ್ ರ್ಯಾಲಿ ನಡೆಸಿದರು. ಮರಾಠಾ ಲೈಟ್ ಇನ್ಫೆಂಟ್ರಿ ಎರಡನೇ ಬಾರಿ ಅರ್ಯ ಇಲಾಖೆ ಸಹಯೋಗದಲ್ಲಿ ಅರಿವು ನೀಡು ಸೈಕಲ್ ರ್ಯಾಲಿ ನಡೆಸಿತು.

ಆಕರ್ಷಣೆ: ನಿವೃತ್ತ ಏರ್ ಕಮೋಡರ್ ಹಿರೇಮಠ ಅವರು ತಮ್ಮ ಸೈಕಲ್ ಏರಿ ವನ್ಯಜೀವಿ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಸಾರಿದರು. ಸಿಸಿಎಫ್ ಪಿ. ಬಿ. ಕರುಣಾಕರ, ಡಿಸಿಎಫ್ ಎಂ. ವಿ. ಅಮರನಾಥ, ಎಸಿಎಫ್ ಎಸ್. ಎಂ. ಸಂಗೊಳ್ಳಿ, ಶಶಿಧರ, ಪತ್ರಾಂಕಿತ ವ್ಯವಸ್ಥಾಪಕ ಸಂತೋಷ ದೇಸಾಯಿ, ಬಸವರಾಜ ವಾಳದ, ನಾಗರಾಜ ಬಾಳೆಹೊಸೂರ, ಸಂಗಮೇಶ ಪ್ರಭಾಕರ, ಶ್ರೀನಾಥ ಕಡೋಲಕರ, ಆರ್. ಎಚ್. ಡೊಂಬರಗಿ, ರಮೇಶ ಗಿರಿಯಪ್ಪನವರ ಇತರರು ಉಪಸ್ಥಿತರಿದ್ದರು.