SHARE

ಬೆಳಗಾವಿ: ಸೋಲಾರ್ ಪವರ್ ಪ್ಲಾಂಟ್ ಪ್ರಾಜೆಕ್ಟ್ ನನ್ನ ಹೆಸರಿನಲ್ಲಿ ಇಲ್ಲ. ಚಾಮುಂಡೇಶ್ವರಿ ಮೇಲೆ ಆಣೆ ಮಾಡುತ್ತೇನೆ. ನನ್ನ ಹೆಸರಿನಲ್ಲಿ ಇದ್ದರೆ ಅದನ್ನು ರಾಜ್ಯದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷೀ ಹೆಬ್ಬಾಳಕರ ನಾಡದೇವಿಯ ಮೇಲೆ ಆಣೆ ಮಾಡಿ ಆರೋಪ ನಿರಾಕರಿಸಿದ್ದಾರೆ. ಇಂದು ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದರು. ಹರ್ಷಾ ಶುಗರ್ಸ್ ಸಂಬಂಧಿಸಿದ ₹೧೨೦ಕೋಟಿ ವಿಚಾರ ಬರೀ ಆರೋಪ ಅಷ್ಟೇ. ಅದು ಸಾಬೀತಾದ್ದದ್ದು ಇಲ್ಲ. ಆದಾಯ ತೆರಿಗೆ ಅಧಿಕಾರಿಗಳು ಮತ್ತು ತನಿಖಾ ಏಜೆನ್ಸಿಗಳು ಸೂಕ್ತ ತನಿಖೆ ಮಾಡುತ್ತವೆ. ಕಪೋಲಕಲ್ಪಿತ ಸುದ್ದಿಗಳಿಗೆ ನಾನು ಜವಾಬ್ದಾರಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.