SHARE

ಬೆಳಗಾವಿ: ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ‌ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಹೊರನಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಅಹವಾಲು ಸ್ವೀಕಾರ ಹೆಸರಿನಲ್ಲಿ ಇಂದು ಬೆಳಿಗ್ಗೆ 9:30ಕ್ಕೆ ಇಡಲಾಗಿದ್ದ ಸಭೆ, 8:30ಕ್ಕೆ ಇಟ್ಟು ಜನ ಬರುವ ಮೊದಲೇ ಸಿಎಂ ಸರ್ಕೀಟ್ ಹೌಸನಿಂದ ತೆರಳಿದ್ದರಿಂದ ದೂರದಿಂದ ಆಗಮಿಸಿದ ಜನತೆ ಆಕ್ರೋಶ ವ್ಯಕ್ತಪಡಿಸಿದರು.

ವಡಗಾವಿಯ ಸರ್ವೋದಯ ಸಂಘಟನೆಯ ಶ್ರೀನಿವಾಸ ತಾಳೂಕರ ಮತ್ತು ಕಾರ್ಯಕರ್ತರು ಹಾಗೂ ಕಿತ್ತೂರಿನ ರಾಷ್ಟ್ರೀಯ ಮಹಿಳಾ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಸಿಗದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು. ಕಾಟಾಚಾರದ ಅಹವಾಲು ಸ್ವೀಕಾರ ಇರಿಸಿ ಜನತೆಗರ ಸಿಗದೇ ಸಿಎಂ ಪಲಾಯನಗೈದಿದ್ದಾರೆ. ಪೊಲೀಸರು ಸರ್ಕೀಟ್ ಹೌಸ್ ಒಳಗೆ ಬಿಡಲಿಲ್ಲ ಎಂದು ಜನತೆ ಆರೋಪಿಸಿದರು.