SHARE

ಬೆಳಗಾವಿ: ತಾಯಿಯ ಸುರಕ್ಷಿತ ಹೆರಿಗೆಗಾಗಿ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸಲು ರಾಜ್ಯದ 10 ಜಿಲ್ಲೆಯಲ್ಲಿ ಆರ್ಟಿಸ್ಟ್ ಸಂಸ್ಥೆ ವತಿಯಿಂದ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಡಾ. ಹೇಮಾ ದಿವಾಕರ್ ಹೇಳಿದರು. ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಗುವಿನ ಜನನಕ್ಕೆ ತಾಯಿಗೆ ಪೌಷ್ಠಿಕ ಆಹಾರ, ಆರೋಗ್ಯ ವೃದ್ಧಿಗಾಗಿ ಸೂಕ್ತ ಆರೈಕೆ ಬಗ್ಗೆ ತರಬೇತಿ ನೀಡಲಾಗುವುದು. ತಾಯಿ ಗರ್ಭಿಣಿ ಸಮಯದಲ್ಲಿ ಗುಣಮಟ್ಟದ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈಗಾಗಲೇ 4 ರಾಜ್ಯಗಳ 25 ಜಿಲ್ಲೆಗಳಲ್ಲಿ 1800 ಆರೋಗ್ಯಸೇವಾ ಪೂರೈಕೆದಾರಿಗೆ ಮಾನ್ಯತೆ ನೀಡಲಾಗಿದ್ದು, 11 ಲಕ್ಷ ಭಾರತೀಯರನ್ನು ತಲುಪಿದೆ. ಕರ್ನಾಟಕದಲ್ಲಿ 5 ಲಕ್ಷ ಮಹಿಳೆಯರನ್ನು ತಲುಪುವ ನಿರೀಕ್ಷೆ ಇದೆ. ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಗರ್ಭಿಣಿ ತಾಯಂದಿರು ಮಗು ಜನನದ ನಂತರ ಮರಣ ಹೊಂದುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. KSOGA & Manyata ಸಂಸ್ಥೆಗಳು ಸಹಯೋಗ ನೀಡಿವೆ ಎಂದರು. ಸುದಿಗೋಷ್ಠಿಯಲ್ಲಿ ಡಾ. ಶೋಭನಾ ಪಟ್ಟೇದ ಉಪಸ್ಥಿತರಿದ್ದು ಮಾತನಾಡಿದರು.