SHARE

ಬೆಳಗಾವಿ: ಮುಖ್ಯಮಂತ್ರಿ ಭೇಟಿ ವೇಳೆ ವಕೀಲರು ಮತ್ತು ಸಾರ್ವಜನಿಕರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆದಿದೆ ಎಂದು ಆರೋಪಿಸಿ ವಕೀಲರ ಜಿಲ್ಲಾಧಿಕಾರಿ ಮುಖ್ಯ ರಸ್ತೆ ಬಂದ್ ಮಾಡಿ ಪೊಲೀಸರ ವಿರುದ್ದ ಘೋಷಣೆ ಕೂಗಿದರು. ಸೆಕ್ಯೂರಿಟಿ ಮ್ಯಾನೆಜಮೆಂಟ್ ಅರಿಯದ ಪೊಲೀಸರು ಮುಗ್ದ್ ಸಾರ್ವಜನಿಕರು ಹಾಗೂ ವಕೀಲರ ಮೇಲೆ ದಬ್ಬಾಳಿಕೆ ಮಾಡಿ, ಅಶ್ಲೀಲ ಭಾಷೆ ಬಳಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎ. ಜಿ. ಮುಳವಾಡಮಠ, ಗಜಾನನ ಪಾಟೀಲ, ಸಿ. ಟಿ. ಮಜ್ಜಗಿ, ಆರ್. ಸಿ. ಪಾಟೀಲ, ಶಿವಪುತ್ರ ಪಟಕಲ್, ಕಮಲೇಶ ಮಾಯಾಂಚೆ ಸೇರಿ ನೂರಾರು ರೈತರು ರಸ್ತೆ ತಡೆ ನಡೆಸಿದರು. ಸಾರ್ವಜನಿಕ ಸಂಚಾರ ಅಸ್ತವ್ಯಸ್ತವಾಯಿತು. ಕಮಿಷ್ನರ್ ಬಿ. ಎಸ್. ಲೊಕೇಶಕುಮಾರ ಮನವಿ ಸ್ವೀಕರಿಸಿದರು.